ಜನಾಗ್ರಹ ಮತ್ತು ಬ್ರೌನ್ ವಿಶ್ವವಿದ್ಯಾಲಯದ ನಡುವಿನ ಸಂಶೋಧನಾ ಪಾಲುದಾರಿಕೆಯಲ್ಲಿ, ಭಾರತದಾದ್ಯಂತ ನಗರಗಳಲ್ಲಿ ಪೌರತ್ವ ಮತ್ತು ಸಾರ್ವಜನಿಕ ಸೇವೆಗಳ ಹಂಚಿಕೆಯ ನಡುವಿನ ಸಂಬಂಧದ ಬಗ್ಗೆ ವ್ಯವಸ್ಥಿತ ಅಂಕಿ-ಅಂಶವನ್ನು ಸಂಗ್ರಹಿಸುವುದು.
“ನಗರ”ದ ವ್ಯಾಖ್ಯಾನವನ್ನು ಅವಲಂಬಿಸಿ, 2011ರ ಭಾರತದ ಒಟ್ಟು ಜನಸಂಖ್ಯೆಯಲ್ಲಿ 32% ನಗರವಾಸಿಗಳಾಗಿದ್ದು, ಮುಂದಿನ 8-10 ವರ್ಷಗಳಲ್ಲಿ, ಅದು 40% ಕ್ಕಿಂತ ಹೆಚ್ಚಾಗಬಹುದು.
ಭಾರತವು ನಗರೀಕರಣವನ್ನು ಮುಂದುವರಿಸುತ್ತಿದ್ದಂತೆ, ಭೂದೃಶ್ಯದ ಕುರಿತು ಕೆಲವು ನಿರ್ಣಾಯಕ ಪ್ರಶ್ನೆಗಳು ಹೊರಹೊಮ್ಮುತ್ತವೆ:
- ಬೆಳೆಯುತ್ತಿರುವ ನಗರಗಳಲ್ಲಿ, ನಾಗರಿಕರು ತಮ್ಮ ಹಕ್ಕುಗಳನ್ನು ಕೋರಲು ಸಮರ್ಥರಾಗಿದ್ದಾರೆಯೇ ಅಥವಾ ರಾಜಕೀಯ ಗಣ್ಯರು ಮತ್ತು ನಾಗರಿಕರ ನಡುವಿನ ಸಂಬಂಧಗಳು ನಿಶ್ಚಲವಾಗಿ ಪ್ರಬಲವಾಗಿದೆಯೇ?
- ರಾಜಕೀಯ ಮತ್ತು ನಾಗರಿಕ ಭಾಗವಹಿಸುವಿಕೆಯ ಮೂಲಕ ನಾಗರಿಕರು ನಡೆಸುವ ಪರಿಣಾಮಕಾರಿ ಪೌರತ್ವವು ಜನರ ಜೀವನದಲ್ಲಿ ಸಾಕಷ್ಟು ಸುಧಾರಣೆಗೆ ಕಾರಣವಾಗಬಹುದೇ? ನಿರ್ದಿಷ್ಟವಾಗಿ ಹೇಳುವುದಾದರೆ, ಸಾರ್ವಜನಿಕ ಸೇವಾ ಹಂಚಿಕೆಯ (ನೀರು, ನೈರ್ಮಲ್ಯ, ವಿದ್ಯುತ್, ಸಾರಿಗೆ) ವ್ಯಾಪ್ತಿ ಮತ್ತು ಗುಣಮಟ್ಟವನ್ನು ಸುಧಾರಿಸಲು ಇದು ಸಹಾಯ ಮಾಡಬಹುದೇ?
ಯೋಜನೆ
ಈ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು, ಜನಾಗ್ರಹ ಮತ್ತು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಶುತೋಷ್ ವರ್ಷ್ನಿ ಮತ್ತು ಪ್ಯಾಟ್ರಿಕ್ ಹೆಲ್ಲರ್ ಅವರು ಸಂಶೋಧನಾ ಪಾಲುದಾರಿಕೆಯನ್ನು ರೂಪಿಸಿ ಮತ್ತು ಯೋಜನೆಯನ್ನು ಅಭಿವೃದ್ಧಿಪಡಿಸಿದರು. ಇದಲ್ಲದೆ, ಪ್ರಾಧ್ಯಾಪಕರಾದ ಸಿದ್ಧಾರ್ಥ್ ಸ್ವಾಮಿನಾಥನ್ (ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ, ಬೆಂಗಳೂರು) ರವರು ಭಾರತದಲ್ಲಿ ನಮ್ಮ ಶೈಕ್ಷಣಿಕ ಸಹಯೋಗಿಯಾಗಿದ್ದಾರೆ.
ಜನ-ಬ್ರೌನ್ ಪೌರತ್ವ ಸೂಚ್ಯಂಕ (JB-CI) ಅಧ್ಯಯನದ ಶೀರ್ಷಿಕೆಯೊಂದಿಗೆ, ನಾವು ಪೌರತ್ವ ಮತ್ತು ಸಾರ್ವಜನಿಕ ಸೇವೆಗಳ ಹಂಚಿಕೆಯ ನಡುವಿನ ಸಂಬಂಧ ಹಾಗೆಯೇ, ನಾಗರಿಕರು ಭಾರತದಾದ್ಯಂತದ ನಗರಗಳಲ್ಲಿ ಸರ್ಕಾರಗಳ ಜೊತೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದರ ಕುರಿತು ವ್ಯವಸ್ಥಿತ ಅಂಕಿ-ಅಂಶವನ್ನು ಸಂಗ್ರಹಿಸುತ್ತಿದ್ದೇವೆ.
ಅಧ್ಯಯನ ಮಾಡುವ ನಗರಗಳು
ದೇಶದ ಎಲ್ಲಾ ಭೌಗೋಳಿಕ ವಲಯಗಳಿಂದ ನಗರಗಳನ್ನು ಆಯ್ಕೆ ಮಾಡಲಾಗಿದೆ. ಕೆಳಗಿನ ಪಟ್ಟಿಯು ಈ ಪ್ರಕರಣದ ಆಯ್ಕೆಗಳನ್ನು ಸಂಕ್ಷಿಪ್ತಗೊಳಿಸುತ್ತದೆ. ಹಸಿರು ಬಣ್ಣದಲ್ಲಿ ಉಲ್ಲೇಖಿಸಲಾದ ನಗರಗಳಲ್ಲಿ ಈಗಾಗಲೇ ಅಂಕಿ-ಅಂಶವನ್ನು ಸಂಗ್ರಹಿಸಲಾಗಿದೆ. ಹಾಗೆಯೇ ನಾವು ಪ್ರಸ್ತುತ, ಕಿತ್ತಳೆ ಬಣ್ಣದಲ್ಲಿ ಉಲ್ಲೇಖಿಸಲಾದ ನಗರಗಳಲ್ಲಿ ಕ್ಷೇತ್ರಕಾರ್ಯಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ಎಲ್ಲಾ ಪಟ್ಟಿ ಮಾಡಲಾದ ನಗರಗಳಲ್ಲಿ ಅಂಕಿ-ಅಂಶಗಳ ಸಂಗ್ರಹಣೆ ಪೂರ್ಣಗೊಂಡ ನಂತರ, ನಗರ ಮತ್ತು ಗ್ರಾಮೀಣ ಆಡಳಿತದ ರಾಷ್ಟ್ರವ್ಯಾಪಿ ಹೋಲಿಕೆ ಮಾಡಲು ಯೋಜಿಸಲಾಗಿದೆ.

ನಗರಗಳ ಭಾಗ JB-CI
ಕ್ರಮ ಸಂಖ್ಯೆ | ನಗರಗಳು (UA) | ಸಂದರ್ಶನಗಳ ಸಂಖ್ಯೆ (ಗುರಿ) | ಜನಸಂಖ್ಯೆ 2011 ರಲ್ಲಿ (UA)* | ರಾಜ್ಯ |
---|---|---|---|---|
1 | ಬೆಂಗಳೂರು | 3000 | 87,49,944 | ಕರ್ನಾಟಕ |
2 | ಮುಂಬೈ | 3000 | 1,83,94,912 | ಮಹಾರಾಷ್ಟ್ರ |
3 | ಚೆನ್ನೈ | 3000 | 86,53,521 | ತಮಿಳುನಾಡು |
4 | ಅಹಮದಾಬಾದ್ | 3000 | 63,57,693 | ಗುಜರಾತ್ |
5 | ಹೈದರಾಬಾದ್ | 3000 | 76,77,018 | ತೆಲಂಗಾಣ/ಆಂಧ್ರಪ್ರದೇಶ |
6 | ದೆಹಲಿ | 3000 | 1,63,49,831 | ದೆಹಲಿ |
7 | ಕೋಲ್ಕತಾ | 3000 | 1,40,57,991 | ಪಶ್ಚಿಮ ಬಂಗಾಳ |
8 | ಕೊಚ್ಚಿ | 2000 | 21,19,724 | ಕೇರಳ |
9 | ವಡೋದರಾ | 2000 | 18,22,221 | ಗುಜರಾತ್ |
10 | ಮೈಸೂರು | 2000 | 9,90,900 | ಕರ್ನಾಟಕ |
11 | ಲಕ್ನೋ | 2000 | 29,02,920 | ಉತ್ತರ ಪ್ರದೇಶ |
12 | ಭೋಪಾಲ್ | 2000 | 18,86,100 | ಮಧ್ಯ ಪ್ರದೇಶ |
13 | ಭುವನೇಶ್ವರ | 2000 | 8,50,000 | ಒಡಿಶಾ |
14 | ಭಾವನಗರ | 1000 | 6,05,882 | ಗುಜರಾತ್ |
15 | ಶಿವಮೊಗ್ಗ | 1000 | 3,22,650 | ಕರ್ನಾಟಕ |
16 | ಅಜ್ಮರ್ | 1000 | 5,51,101 | ರಾಜಸ್ಥಾನ |
17 | ಜಲಂದರ್ | 1000 | 8,74,412 | ಪಂಜಾಬ್ |
ನಗರ ಒಟ್ಟುಗೂಡಿಸುವಿಕೆ (UA) ನಗರಗಳ ಸುತ್ತಮುತ್ತಲಿನ ನಗರ ಪ್ರದೇಶಗಳಲ್ಲಿನ ಜನಸಂಖ್ಯೆಯನ್ನು ಒಳಗೊಂಡಿದೆ (ಜನಗಣತಿ 2011, ಭಾರತ ಸರ್ಕಾರ).
ಹಸಿರು ಬಣ್ಣ – ಕ್ಷೇತ್ರಕಾರ್ಯ ಪೂರ್ಣಗೊಂಡಿದೆ
ಕಿತ್ತಳೆ ಬಣ್ಣ – ಕ್ಷೇತ್ರಕಾರ್ಯಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ
ಸಂಶೋಧನೆಗಳು
“ನಮ್ಮ ಬೆಂಗಳೂರು” ಸಂಶೋಧನೆಗಳನ್ನು ಇಲ್ಲಿ ಅಧ್ಯಯನ ಮಾಡಬಹುದು.
- ನಗರ ಭಾರತದಲ್ಲಿ ಪೌರತ್ವ: ಬೆಂಗಳೂರಿನ ಅಧ್ಯಯನದ ಸಾಕ್ಷಿ
- ಬೆಂಗಳೂರಿನಲ್ಲಿ ಪೌರತ್ವ: ತಜ್ಞರ ವಿಮರ್ಶೆ
- ಪೌರತ್ವವು ವರ್ಗವನ್ನು ಕಡಿಮೆ ಮಾಡುತ್ತದೆ? EPW ನಲ್ಲಿ ನಮ್ಮ ಲೇಖನವನ್ನು ಓದಿ.ಇಲ್ಲಿ ಓದಿ..
ಸಂಪರ್ಕಿಸಿ:
ಹೆಚ್ಚಿನ ಮಾಹಿತಿಗಾಗಿ ಅಥವಾ ಯೋಜನೆಯ ಯಾವುದೇ ಅಂಶಗಳನ್ನು ಚರ್ಚಿಸಲು, ಕೇಟೀ ಪೈಲ್ಜ, ಜನಾಗ್ರಹ ಸಂಶೋಧನೆ ಮತ್ತು ಒಳನೋಟ ವಿಭಾಗದ ಮುಖ್ಯಸ್ಥೆ ಬೆಂಗಳೂರು, ಇವರನ್ನು ಸಂಪರ್ಕಿಸಿ. ಇಮೇಲ್: Katie.pyle@janaagraha.org