ದಿನಾಂಕ: 23 ಜುಲೈ 2024 ರಂದು ಕರ್ನಾಟಕ ವಿಧಾನಸಭೆಯಲ್ಲಿ ಸರ್ಕಾರವು ಮಂಡಿಸಲಾದ ಬೃಹತ್ ಬೆಂಗಳೂರು ಆಡಳಿತ (ಜಿಬಿಜಿ) ಮಸೂದೆಯು 21ನೇ ಶತಮಾನದಲ್ಲಿ ಸ್ಪಂದನಾತ್ಮಕ ಮತ್ತು ಆಧುನಿಕ ಬೆಂಗಳೂರನ್ನು ನಿರ್ಮಿಸಲು ಅಗತ್ಯವಾದ ಆಡಳಿತದ ಅನೇಕ ಪ್ರಗತಿಪರ ಅಂಶಗಳನ್ನು ಒಳಗೊಂಡಿಲ್ಲ.
ನಗರ-ವ್ಯವಸ್ಥೆಗಳ ಚೌಕಟ್ಟಿನ ಆಧಾರದ ಮೇಲೆ ಜಿಬಿಜಿ ಮಸೂದೆ ಮತ್ತು ಬಿಬಿಸಿ-ಜಿಬಿಜಿ ಮಸೂದೆ ಆಳವಾದ ತುಲನಾತ್ಮಕ ವಿಶ್ಲೇಷಣೆಯನ್ನು ನಾವು ಕೈಗೊಂಡಿದ್ದು. ಈ ಅಧ್ಯಯನಕ್ಕೆ, ನಾವು ಸಿದ್ದಪಡಿಸಿದ್ದ ಭಾರತದ ನಗರ-ವ್ಯವಸ್ಥೆಗಳ ವಾರ್ಷಿಕ ಸಮೀಕ್ಷೆ (ASICS) ಎಂಬ ಪ್ರಮುಖ ವರಧಿಯಲ್ಲಿ ವಿವರಿಸಲಾದ ಚೌಕಟ್ಟು ಆಧಾರವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ (ಬಿಬಿಎಂಪಿ), 2020 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ (ಕೆಎಂಸಿ) ಕಾಯ್ದೆ, 1976 ಅನ್ನು ಸಹ ತುಲನಾತ್ಮಕ ಅಧ್ಯಯನದಲ್ಲಿ ಪರಿಗಣಿಸಲಾಗಿದೆ.
ಅಧ್ಯಯನವು ನಾಲ್ಕು ಮಸೂದೆಗಳ/ಕಾಯ್ದೆಗಳ 33 ನಿಯತಾಂಕಗಳ ಜೊತೆಗೆ ಮೌಲ್ಯಮಾಪನ ಮಾಡುತ್ತದೆ, ಹಾಗು ಅವುಗಳನ್ನು 0 ರಿಂದ 10 ರ ಪ್ರಮಾಣದಲ್ಲಿ ಸ್ಕೋರ್ ಮಾಡುತ್ತದೆ. ಹೆಚ್ಚಿನ ಸ್ಕೋರ್, ಮಸೂದೆಗಳ/ಕಾಯ್ದೆಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಎಂದು ತಿಳಿಸುತ್ತದೆ.
ಜಿಬಿಜಿ ಮಸೂದೆಯು ನಗರ ಯೋಜನೆ ಮತ್ತು ವಿನ್ಯಾಸ, ನಗರ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳು, ಅಧಿಕಾರ ಮತ್ತು ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಮತ್ತು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಎಲ್ಲಾ ನಾಲ್ಕು ನಗರ-ವ್ಯವಸ್ಥೆಗಳ ವರ್ಗಗಳಲ್ಲಿ ನಿರಾಶಾದಾಯಕ ಅಂಕಗಳನ್ನು ಗಳಿಸಿದೆ. ಒಟ್ಟಾರೆಯಾಗಿ, ಜಿಬಿಜಿ ಮಸೂದೆಯು 10ರಲ್ಲಿ 3.35 ಅಂಕಗಳನ್ನು ಗಳಿಸಿದೆ. ಜಿಬಿಜಿ ಮಸೂದೆಯು ಬಿಬಿಸಿ-ಜಿಬಿಜಿ ಮಸೂದೆಗಿಂತ ಅರ್ಧದಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.