
ನನ್ನನಗರನನ್ನಬಜೆಟ್ (MyCityMyBudget) ಅಭಿಯಾನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗು ಬೆಂಗಳೂರು ನಾಗರಿಕರ ಸಹಯೋಗದೊಂದಿಗೆ ಕೈಗೊಳ್ಳುವ ನಾಗರಿಕರ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡುವ ಪ್ರಕ್ರಿಯೆಯಾಗಿದೆ. ಈ ಅಭಿಯಾನವು ಬೆಂಗಳೂರಿನ ನಾಗರಿಕರು ತಮ್ಮ ನಗರ ಬಜೆಟ್ ತಯಾರಿಕೆಯಲ್ಲಿ ತಮ್ಮನು ತಾವು ತೊಡಗಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. ಇದು ಬಜೆಟ್ಗಳು ಮತ್ತು ನಾಗರಿಕ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ, ಏಕೆಂದರೆ ಇದರಿಂದ ನಮ್ಮ ನಗರದ ಉದ್ಯಾನವನಗಳು, ತೆರೆದ ಸ್ಥಳಗಳು, ರಸ್ತೆಗಳು, ಕಾಲುದಾರಿಗಳು, ನೀರು, ಸಾರ್ವಜನಿಕ ಶೌಚಾಲಯಗಳು, ಸಾರಿಗೆ ಮತ್ತು ಇತರ ಮೂಲಸೌಕರ್ಯಗಳ ಗುಣಮಟ್ಟವನ್ನು ನೇರವಾಗಿ ಸುಧಾರಿಸಲು ಸಹಾಯ ಮಾಡುತ್ತದೆ. ನಾಗರಿಕರು, ವಾರ್ಡ್ ಕೌನ್ಸಿಲರ್ಗಳು ಮತ್ತು ನಾಗರಿಕ ಸಂಸ್ಥೆ ಅಧಿಕಾರಿಗಳ ನಡುವಿನ ಹೊಂದಾಣಿಕೆ, ವಾರ್ಡ್ ಮತ್ತು ನೆರೆಹೊರೆ-ಮಟ್ಟದ ಬಜೆಟ್ಗಳು ಮತ್ತು ನಾಗರಿಕ ಯೋಜನೆಗಳ ಅಂಕಿ ಅಂಶಗಳಿಂದ ಕೂಡಿದ್ದು, ಅದರ ಜೊತೆಗೆ ನಾಗರಿಕರು, ವಾರ್ಡ್ ಕೌನ್ಸಿಲರ್ಗಳು ಮತ್ತು ನಾಗರಿಕ ಸಂಸ್ಥೆ ಅಧಿಕಾರಿಗಳ ನಡುವಿನ ಹೊಂದಾಣಿಕೆಯು, ಬೆಂಗಳೂರನ್ನು ಪರಿವರ್ತಿಸಬಹುದು ಎಂದು ಜನಾಗ್ರಹ ನಂಬುತ್ತದೆ. ನಾಗರಿಕರ ಬಜೆಟ್ 2018-19 ವರದಿಯು ಎಲ್ಲಾ ವಿವರಗಳನ್ನು ಸೆರೆಹಿಡಿಯುತ್ತದೆ. ಸಂಪೂರ್ಣ ವರದಿಯನ್ನು ಕನ್ನಡದಲ್ಲಿ ಓದಿ.