ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಾಗರೀಕರು ದೃಢವಾದ ಮತ್ತು ಅಭಿವೃದ್ಧಿ ಹೊಂದುವ ಪ್ರಜಾಪ್ರಭುತ್ವವನ್ನು ನಿರ್ಮಿಸುತ್ತಾರೆ. ಆದ್ದರಿಂದ ನಾಗರೀಕರ ಭಾಗವಹಿಸುವಿಕೆಯು, ಪ್ರಜಾಪ್ರಭುತ್ವದ ಗುಣಮಟ್ಟವನ್ನು ನಿರ್ಧರಿಸುತ್ತದೆ.
ನನ್ನ ನಗರ ನನ್ನ ಜವಾಬ್ದಾರಿ ಈ ಕೈಪಿಡಿಯು ಸಕ್ರಿಯ ನಾಗರಿಕತ್ವದ ಕೈಪಿಡಿಯಾಗಿದ್ದು, ಇದು ನೆರೆಹೊರೆಯ ಮಟ್ಟದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಈ ಕೈಪಿಡಿಯು, ನಾಗರಿಕರನ್ನು ಸಕ್ರಿಯ ನಾಗರಿಕರನ್ನಾಗಿ ಮಾಡಲೆಂದೇ ವಿನ್ಯಾಸಗೊಂಡಿದೆ. ಈ ಕೈಪಿಡಿಯು, ಔಪಚಾರಿಕ ಮತ್ತು ಅನೌಪಚಾರಿಕ ನಾಗರಿಕ ಸಮೂಹಗಳ ಮೂಲಕ ನಾಗರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದೆಂಬ ಮಾರ್ಗದರ್ಶನವನ್ನು ನೀಡುತ್ತದೆ. ಇದು ಅವರ ನಗರಗಳಲ್ಲಿನ ವಾರ್ಡ್ ಸಮಿತಿಗಳ ಸ್ಥಿತಿಗತಿಯನ್ನು ಗುರುತಿಸಿ, ವಾರ್ಡ್ ಸಮಿತಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಬೇಕಾಗುವ ಕ್ರಮಗಳ ಪಟ್ಟಿಯನ್ನು ತಯಾರಿಸಲು ಸಹಾಯ ಮಾಡುತ್ತದೆ. ಈ ಕೈಪಿಡಿಯು ನಗರ ಸರ್ಕಾರಗಳ ಮತ್ತು ವಾರ್ಡ್ ಸಮಿತಿಗಳ ಕಾರ್ಯನಿರ್ವಹಣೆಯನ್ನು ವಿವರಿಸುತ್ತದೆ ಮತ್ತು ನಾಗರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಾಮಾಜಿಕ ಮಾಧ್ಯಮದ ಬಳಕೆಯ ವಿಧಾನವನ್ನು ಒದಗಿಸುತ್ತದೆ.
ನನ್ನ ನಗರ ನನ್ನ ಜವಾಬ್ದಾರಿ ಈ ಕೈಪಿಡಿಯು, ನಮ್ಮ 20 ವರ್ಷಗಳ ಕಲಿಕೆ ಮತ್ತು ಸಾಮೂಹಿಕವಾಗಿ ಜೊತೆಗೂಡಿ ಕೈಗೊಂಡಿರುವ ಬದಲಾವಣೆಯ ಅನುಭವಗಳನ್ನು ಪ್ರಸ್ತಾಪಿಸುತ್ತದೆ. ಈ ಕೈಪಿಡಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ನಮ್ಮೊಡನೆ ಸಂವಹನ ನಡೆಸಲು ನಾವು ನಿಮಗಾಗಿ ಒಂದು ಜಾಲತಾಣವನ್ನು ನಿರ್ಮಿಸುವ ಹಂತದಲ್ಲಿದ್ದೇವೆ.